Source: 
Author: 
Date: 
07.05.2018
City: 
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಸಸುಮಾರು 391 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್‌ ಆಧಾರದ ಮೇರೆಗೆ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಮತ್ತು ಇತರೆ ವಿವರಗಳ ವಿಶ್ಲೇಷಣಾ ವರದಿಯನ್ನು ತಯಾರಿಸಿಲಾಗಿದೆ.
2,560 ಅಭ್ಯರ್ಥಿಗಳಲ್ಲಿ 391 ಅಭ್ಯರ್ಥಿಗಳ  ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ . 254 (ಶೇ.10)ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಪ್ರಕರಣಗಳಿವೆ. 4 ಅಭ್ಯರ್ಥಿಗಳ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳಿವೆ. 25 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.
ಕ್ರಿಮಿನಲ್‌ ಪ್ರಕರಣಗಳಲ್ಲಿ ಬಿಜೆಪಿಯಲ್ಲಿ 83, ಕಾಂಗ್ರೆಸ್‌ 59, ಜೆಡಿಎಸ್‌ 41, ಸಂಯುಕ್ತ ಜನತಾದಳದ 25 ಅಭ್ಯರ್ಥಿಗಳಲ್ಲಿ 5, ಆಪ್‌ ಪಕ್ಷ ದ 27 ಅಭ್ಯರ್ಥಿಗಳಲ್ಲಿ 5, 1090 ಪಕ್ಷೇತರ ಅಭ್ಯರ್ಥಿಗಳಲ್ಲಿ 108 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಇವೆ. 
ಅದೇ ರೀತಿ ಬಿಜೆಪಿಯ 58, ಕಾಂಗ್ರೆಸ್‌ನ 32, ಜೆಡಿಎಸ್‌ನ 29, ಸಂಯುಕ್ತ ಜನತಾದಳದ 3, ಆಪ್‌ ಪಕ್ಷ ದ 27 ಅಭ್ಯರ್ಥಿಗಳಲ್ಲಿ ಒಬ್ಬರು, 1090 ಪಕ್ಷೇತರ ಅಭ್ಯರ್ಥಿಗಳಲ್ಲಿ 70 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ 
254 (ಶೇ.10)ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಪ್ರಕರಣಗಳಿವೆ. 4 ಅಭ್ಯರ್ಥಿಗಳ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳಿವೆ. 25 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.
 
ಅದೇ ರೀತಿ 1,351 (ಶೇ.55) ಅಭ್ಯರ್ಥಿಗಳು 5ನೇ ತರಗತಿಯಿಂದ 12ನೇ ತರಗತಿ ನಡುವೆ ಶಿಕ್ಷಣ ಹೊಂದಿದ್ದರೆ, 23 ಮಂದಿ ಡಾಕ್ಟರೇಟ್, 239 ಸ್ನಾತಕೋತ್ತರ ಪದವಿದರರು ಹಾಗೂ 309 ಆಭ್ಯರ್ಥಿಗಳು  ವೃತ್ತಿಪರ ಪದವಿ ಹಾಗೂ 410 ಮಂದಿ ಪದವೀಧರರಿದ್ದು, 50 ಅಭ್ಯರ್ಥಿಗಳು ಅನಕ್ಷರಸ್ಥರಾಗಿದ್ದಾರೆ, 
802 ಅಭ್ಯರ್ಥಿಗಳು  41-50 ವರ್ಷದೊಳಗಿದ್ದಾರೆ, ಒಬ್ಬ ಅಭ್ಯರ್ಥಿ 25 ವರ್ಷ ವಯಸ್ಸಿಗಿಂತ ಕಡಿಮೆಯಿದ್ದು, ಶೇ. 8ರಷ್ಟು ಮಹಿಳೆಯರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
2560 ಹುರಿಯಾಳುಗಳಲ್ಲಿ 883 ಮಂದಿ ಕೋಟ್ಯಾಧಿಪತಿಗಳೇ ಆಗಿದ್ದಾರೆ. ಕಾಂಗ್ರೆಸ್‌ನಲ್ಲಿ 207, ಬಿಜೆಪಿಯಲ್ಲಿ 208, ಜೆಡಿಎಸ್‌ ನಲ್ಲಿ 154, ಜೆಡಿಯು 13, ಆಮ್‌ ಆದ್ಮಿ ಪಕ್ಷದ 9 ಮಂದಿ ಹಾಗೂ ಪಕ್ಷೇತರರಲ್ಲಿ 199 ಮಂದಿ ಕೋಟ್ಯಾಧಧಿಪತಿಗಳಿದ್ದಾರೆ. 
ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಕೃಷ್ಣ ಅವರು ಮೊದಲ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 1020 ಕೋಟಿ ರೂ. 2ನೇ ಸ್ಥಾನದಲ್ಲಿ ಹೊಸಕೋಟೆಯ ಕಾಂಗ್ರೆಸ್‌ ಅಭ್ಯರ್ಥಿ ಎಂಟಿಬಿ ನಾಗರಾಜ್‌. ಇವರ ಆಸ್ತಿ 1015 ಕೋಟಿ ರೂ. ನಂತರದ ಸ್ಥಾನದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಇದ್ದು, ಇವರ ಆಸ್ತಿ ಮೌಲ್ಯ 840 ಕೋಟಿ ರೂ. ಇನ್ನು, ಬಿಜೆಪಿಯ 224 ಮಂದಿ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 17.86 ಕೋಟಿ ರೂ.ಗಳಾಗಿದ್ದರೆ, ಕಾಂಗ್ರೆಸ್‌ನ 220 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 38.75 ಕೋಟಿಗಳಾಗಿದೆ. 

ರೆಡ್ ಅಲರ್ಡ್ ಪಟ್ಟಿಯಲ್ಲಿ ಕೋಲಾರಕ್ಕೆ ಮೊದಲ ಸ್ಥಾನ,  ಈ ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿವೆ.  ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
© Association for Democratic Reforms
Privacy And Terms Of Use
Donation Payment Method