Source: 
Author: 
Avinasha Vagarnal
Date: 
10.03.2020
City: 

ಹೊಸದಿಲ್ಲಿ: ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ಅನಧಿಕೃತ ಆದಾಯ ಮೂಲಗಳಿಂದ ದೇಣಿಗೆ ಹರಿದುಬರುತ್ತಿದೆ ಎಂದು ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಬಿಡುಗಡೆ ಮಾಡಿರುವ ವರದಿಯಿಂದ ಬಹಿರಂಗವಾಗಿದೆ.

2004 ರಿಂದ 2019ರ ಅವಧಿಯಲ್ಲಿ ಏಳು ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಇಂತಹ ಅನಧಿಕೃತ ಮೂಲಗಳಿಂದ ಬರೋಬ್ಬರಿ 11,234 ಕೋಟಿ ರೂ. ದೇಣಿಗೆ ಸಂದಾಯವಾಗಿದೆ ಎಂದು ವರದಿ ತಿಳಿಸಿದೆ.

ಬಿಜೆಪಿಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಸಿಪಿಐ(ಎಂ), ಸಿಪಿಐ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆದಾಯ ದಾಖಲೆಗಳಿಂದ ಈ ಮಾಹಿತಿ ಬಯಲಾಗಿದೆ.

20 ಸಾವಿರ ರೂ.ಗಿಂತಲೂ ಕಡಿಮೆ ಮೊತ್ತದ ದೇಣಿಗೆ ನೀಡಿದವರ ಹೆಸರುಗಳನ್ನು ರಾಜಕೀಯ ಪಕ್ಷಗಳು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ರಿಟರ್ನ್ಸ್‌ಗಳಲ್ಲಿ ಬಹಿರಂಗಪಡಿಸಿಲ್ಲ. ಎಲೆಕ್ಟ್ರೊಲ್‌ ಬಾಂಡ್‌, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ, ಸ್ವಯಂ ದೇಣಿಗೆ, ಸಭೆ/ಸಮಾವೇಶಗಳಿಗೆ ನೀಡಿದ ಆರ್ಥಿಕ ಕೊಡುಗೆಯನ್ನು ಅನಧಿಕೃತ ಮೂಲಗಳೆಂದು ಪರಿಗಣಿಸಲಾಗಿದೆ.

'ಕೈ'ಗೆ ಜ್ಯೋತಿರಾದಿತ್ಯ ರಾಜೀನಾಮೆ, ರಾಜಮನೆತನದ ನಂಟು ಕಳೆದುಕೊಂಡ ಕಾಂಗ್ರೆಸ್‌

ಇಂತಹ ಮೂಲಗಳಿಂದ 2004-05ನೇ ಸಾಲಿನಿಂದ 2018-19ನೇ ಸಾಲಿನ ಅವಧಿಯಲ್ಲಿರಾಜಕೀಯ ಪಕ್ಷಗಳಿಗೆ ಒಟ್ಟು 11,234.12 ಕೋಟಿ ರೂ. ದೇಣಿಗೆ ಸಂದಾಯವಾಗಿದೆ ಎಂದು ವರದಿಯ ಅಂಕಿ-ಅಂಶಗಳು ವಿವರಿಸಿವೆ. ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದವರ ಹೆಸರನ್ನೂ ಬಹಿರಂಗಪಡಿಸಲಾಗದ ಹಿನ್ನೆಲೆಯಲ್ಲಿ ಇದನ್ನು ಸಹ ಅನಧಿಕೃತ ಆದಾಯ ಮೂಲಗಳೆಂದೇ ಪರಿಗಣಿಸಲಾಗಿದೆ.

ಮಧ್ಯಪ್ರದೇಶದಲ್ಲಿ 'ಕೈ' ಶಾಸಕರ ರಾಜೀನಾಮೆ ಪರ್ವ, ಮತ್ತೆ ಮೂವರು ಕಾಂಗ್ರೆಸ್‌ಗೆ ಗುಡ್‌ಬೈ

ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ಮುಂದೆ
2018-19ನೇ ಸಾಲಿನಲ್ಲಿ ಬಿಜೆಪಿಯು ಒಟ್ಟು 1,612 ಕೋಟಿ ರೂ.ಅನ್ನು ಅನಧಿಕೃತ ಆದಾಯ ಮೂಲಗಳಿಂದ ದೇಣಿಗೆ ಸಂಗ್ರಹಿಸಿರುವುದಾಗಿ ಘೋಷಿಸಿಕೊಂಡಿದೆ. ಅಂದರೆ, ಈ ಅವಧಿಯಲ್ಲಿ ರಾಜಕೀಯ ಪಕ್ಷಗಳಿಗೆ ಇಂತಹ ಮೂಲಗಳಿಂದ ಬಂದ 2,512 ಕೋಟಿ ರೂ. ದೇಣಿಗೆಯಲ್ಲಿ ಬಿಜೆಪಿಯ ಪಾಲು ಶೇ.64ರಷ್ಟಿದ್ದು ಮುಂಚೂಣಿಯಲ್ಲಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್‌ಗೆ ಅನಧಿಕೃತ ಮೂಲಗಳಿಂದ 728 ಕೋಟಿ ರೂ. ದೇಣಿಗೆ ಹರಿದು ಬಂದಿದ್ದು, ಒಟ್ಟು ದೇಣಿಗೆಯಲ್ಲಿಈ ಪಕ್ಷದ ಪಾಲು ಶೇ.29ರಷ್ಟಿದೆ.

© Association for Democratic Reforms
Privacy And Terms Of Use
Donation Payment Method