ನವದೆಹಲಿ, ಡಿಸೆಂಬರ್ 18: 2017-18 ನೇ ಹಣಕಾಸು ವರ್ಷದ ತನ್ನ ಒಟ್ಟು ಆದಾಯ ಮತ್ತು ವೆಚ್ಚವನ್ನು ಬಿಜೆಪಿ ಘೋಷಿಸಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎನ್ ಜಿಒ ಸಿದ್ಧಪಡಿಸಿದ ವರದಿಯ ಪ್ರಕಾರ ಬಿಜೆಪಿಯು 1027 ಕೋಟಿ ರೂ.ಗಳನ್ನು ತನ್ನ ಒಟ್ಟು ಆದಾಯ ಎಂದು ಚುನಾವಣಾ ಆಯೋಗಕ್ಕೆ ನೀಡಿದೆ.ಅಂತೆಯೇ ಇದರಲ್ಲಿ 758 ಕೋಟಿ ರೂ.ಗಳನ್ನು ವೆಚ್ಚವನ್ನಾಗಿ ತೋರಿಸಿದೆ. ಕಾಂಗ್ರೆಸ್ ಇದುವರೆಗೂ ತನ್ನ ಆದಾಯದ ಮತ್ತು ವೆಚ್ಚದ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲ.6 ತಿಂಗಳಲ್ಲಿ ಬರೋಬ್ಬರಿ 206 ಕೋಟಿ ಆದಾಯ ಗಳಿಸಿದ ನಮ್ಮ ಮೆಟ್ರೋಬಹುಜನ ಸಮಾಜವಾದಿ ಪಕ್ಷದ ಒಟ್ಟು ಆದಾಯ 51.7 ಕೋಟಿ ರೂ. ಅದರಲ್ಲಿ 14.78 ಕೋಟಿ ರೂ.ಗಳನ್ನು ಅದು ವೆಚ್ಚ ಮಾಡಿದೆ.ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಯು ತನ್ನ ಆದಾಯಕ್ಕಿಂತ ಹೆಚ್ಚು ವೆಚ್ಚವನ್ನು ತೋರಿಸಿರುವ ಏಕೈಕ ಪಕ್ಷವಾಗಿದೆ. ಅದರ ಆದಾಯ ಒಟ್ಟು 8.15 ಕೋಟಿ ರೂ. ಆಗಿದ್ದರೆ, ವೆಚ್ಚ 8.84 ಕೋಟಿ ರೂ.ಗಳು.ರಾಹುಲ್ ಗಾಂಧಿ ನೂರು ಸುಳ್ಳು ಹೇಳಿದರೂ, ಸತ್ಯಕ್ಕೇ ಜಯ: ಬಿಜೆಪಿ2016-17 ನೇ ಸಾಲಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿ ಮತ್ತು ಬಿಎಸ್ಪಿ ಎರಡೂ ಪಕ್ಷಗಳ ಆದಾಯದಲ್ಲಿ ಇಳಿಮುಖವಾಗಿರುವುದು ಕಂಡುಬರುತ್ತಿದೆ.