Date
ಬೆಂಗಳೂರು: ತಮ್ಮ ವಿರುದ್ದ ಕ್ರಿಮಿನಲ್ ಪ್ರಕರಣಗಳಿದ್ದಾಗ್ಯೂ ರಾಜ್ಯವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಲವು ಶಾಸಕರು ತಮ್ಮ ಸ್ವಕ್ಷೇತ್ರಗಳಲ್ಲಿ ಶೇ.50 ರಷ್ಚು ಮತಗಳನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಶುಕ್ರವಾರ ವರದಿ ಬಿಡುಗಡೆ ಮಾಡಿರುವ ಎಡಿಆರ್, 77 ರಲ್ಲಿ 44 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ, ಆದರೆ ಅವರಿಗೆ ಅವರ ಕ್ಷೇತ್ರದಲ್ಲಿ ಶೇ. 50 ಕ್ಕೂ ಹೆಚ್ಚು ಮತ ಸಿಕ್ಕಿದೆ ಎಂದು ತಿಳಿಸಿದೆ. ಶೇ, 57 ರಷ್ಟು ಶಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳಿವೆ, ಶೇ. 38 ರಷ್ಟು ಶಾಸಕರ ವಿರುದ್ಧ ಯಾವುದೇ ಮೊಕದ್ದಮೆಗಳಿಲ್ಲ ಎಂದು ತಿಳಿಸಿದೆ.
ಮೇ 12 ರಂದು ನಡೆದ 222 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ 77 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಗಳಿದ್ದವು, ಅದರಲ್ಲಿ 49 ಶಾಸಕರಿಗೆ ಮಾತ್ರ ಕ್ಲೀನ್ ಇಮೇಜ್ ಇದೆ.ಈ ಶಾಸಕರಿಗೆ ಜಯ ಕೂಡ ಕಠಿಣವಾಗಿತ್ತು, ಕ್ಲೀನ್ ಇಮೇಜ್ ಇದ್ದ ಶಾಸಕರಿಗೆ ಕೇವಲ ಶೇ, 20 ರಷ್ಟು ಮಾತ್ರ ಪಡೆದಿದ್ದಾರೆ.
ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕರಲ್ಲಿ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ. ಅಶ್ವತ್ಥ ನಾರಾಯಣ 54 ಸಾವಿರ ಮತಗಳ ಅಂತರದಿಂದ ಜಯಸಾಧಿಸಿದ್ದಾರೆ.
99 ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಶೇ,50 ರಷ್ಟು ಮತ ಪಡೆದಿದ್ದರೇ ಉಳಿದ 123 ಅಭ್ಯರ್ಥಿಗಳು ಶೇ, 50 ಕ್ಕಿಂತಲೂ ಕಡಿಮೆ ಮತ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ,
ಜೆಡಿಎಸ್ ,ಬಿಜೆಪಿಗಿಂತ ಕಾಂಗ್ರೆಸ್ ಗೆ ಹೆಚ್ಚು ಮತ ಹಂಚಿಕೆಯಾಗಿದೆ, 104 ಬಿಜೆಪಿ ಶಾಸಕರಲ್ಲಿ 53 ಶಾಸಕರು ಮಾತ್ರ ಶೇ.51 ರಷ್ಟು ಮತ ಪಡೆದಿದ್ದಾರೆ, ಕಾಂಗ್ರೆಸ್ ನ 78 ಶಾಸಕರಲ್ಲಿ .48 ಶಾಸಕರು ಶೇ61ರಷ್ಟು ಮತ ಪಡೆದಿದ್ದಾರೆ, ಜೆಡಿಎಸ್ ನವ ಅರ್ಧದಷ್ಟು ಶಾಸಕರು ಶೇ,. 50 ರಷ್ಟು ಮತ ಪಡದಿದ್ದಾರೆ.
ಐದು ಶಾಸಕರು 1 ಸಾವಿರ ಮತಗಳ ಅತಂರದಿಂದ ಗೆದ್ದಿದ್ದಾರೆ. ಮಸ್ಕಿಯ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ್ 213. ಪಾವಗಡದ ವೆಂಕಟರಮಣಪ್ಪ 409, ಹಿರೇಕೆರೂರಿನ ಬಸವನಗೌಡ ಪಾಟೀಲ್ 555, ಕುಂದಗೋಳದ ಚನ್ನಬಸಪ್ಪ ಶಿವಾಲಿ 634, ಮಾಜಿ ಸಿಎಂ ಸಿದ್ದರಾಮಯ್ಯ 1,696 ಮತಗಳಿಂದ ಗೆದ್ದಿದ್ದಾರೆ.