Skip to main content
Date
ನವದೆಹಲಿ: ಛತ್ತೀಸ್ ಗಢ ವಿಧಾನಸಭೆಯ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 1,079 ಅಭ್ಯರ್ಥಿಗಳ ಪೈಕಿ 130 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ 90 ಅಭ್ಯರ್ಥಿಗಳು ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ನವೆಂಬರ್ 20ರಂದ ಛತ್ತೀಸ್ ಗಢದ 19 ಜಿಲ್ಲೆಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟು 239 ಕೋಟ್ಯಾಧಿಪತಿಗಳು ಕಣದಲ್ಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ತಿಳಿಸಿದೆ.
ಕಾಂಗ್ರೆಸ್ 18 ಅಭ್ಯರ್ಥಿಗಳು, ಆಮ್ ಆದ್ಮಿ ಪಕ್ಷದ 17 ಅಭ್ಯರ್ಥಿಗಳು ಜನತಾ ಕಾಂಗ್ರೆಸ್ ಛತ್ತೀಸ್ ಗಢದ 15 ಅಭ್ಯರ್ಥಿಗಳು ಹಾಗೂ ಆಡಳಿತರೂಢ ಬಿಜೆಪಿಯ 6 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಇನ್ನು ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ 90 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ 11, ಆಮ್ ಆದ್ಮಿ 13 ಹಾಗೂ ಜನತಾ ಕಾಂಗ್ರೆಸ್ ಛತ್ತೀಸ್ ಗಢದ 14 ಅಭ್ಯರ್ಥಿಗಳಿದ್ದಾರೆ.