Skip to main content
Source
Kannada.asianetnew
https://kannada.asianetnews.com/india-news/income-of-regional-political-parties-from-unknown-sources-in-financial-year-2021-22-at-rs-887-crore-adr-report-ash-ruse1d
Date
City
New Delhi

ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಅನಾಮಿಕ ಮೂಲಗಳಿಂದ ಹರಿದು ಬಂದ ಆದಾಯ ಸುಮಾರು 600 ಕೋಟಿ ರೂ. ನಷ್ಟು ಹೆಚ್ಚಿದೆ ಎಂದು ಎಡಿಆರ್‌ ವರದಿ ಹೇಳಿದೆ.

ಪ್ರಾದೇಶಿಕ ಪಕ್ಷಗಳಿಗೆ 2021-22ನೇ ಸಾಲಿನಲ್ಲಿ ಅನಾಮಧೇಯ ಮೂಲಗಳಿಂದ 887.55 ಕೋಟಿ ರೂ. ಆದಾಯ ಹರಿದುಬಂದಿದೆ. ಇದು ಅವುಗಳ ಒಟ್ಟಾರೆ ಆದಾಯದ ಶೇ.76ರಷ್ಟು ಎಂದು ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್‌ (ಎಡಿಆರ್‌) ಸಂಸ್ಥೆಯ ಅಧ್ಯಯನ ಹೇಳಿದೆ. ಈ 887 ಕೋಟಿ ರೂ ಪೈಕಿ 827 ಕೋಟಿ ರೂ. ಚುನಾವಣಾ ಬಾಂಡ್‌ಗಳಿಂದ ಹರಿದುಬಂದಿದೆ.

2020-21ರಲ್ಲಿ ಒಟ್ಟಾರೆಯಾಗಿ ಪ್ರಾದೇಶಿಕ ಪಕ್ಷಗಳಿಗೆ 530 ಕೋಟಿ ರೂ. ಆದಾಯ ಹರಿದು ಬಂದಿತ್ತು. ಈ ಪೈಕಿ 263.93 ಕೋಟಿ ರೂ ಮೊತ್ತವು ಅನಾಮಿಕ ಮೂಲದಿಂದ ಬಂದಿತ್ತು. ಇದು ಒಟ್ಟಾರೆ ಆದಾಯದ ಶೇ.49.73 ರಷ್ಟಾಗಿತ್ತು. ಹೀಗಾಗಿ ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಅನಾಮಿಕ ಮೂಲಗಳಿಂದ ಹರಿದು ಬಂದ ಆದಾಯ ಸುಮಾರು 600 ಕೋಟಿ ರೂ. ನಷ್ಟು ಹೆಚ್ಚಿದೆ ಎಂದು ಹೇಳಿದೆ.

20 ಸಾವಿರ ರೂ.ಗಿಂತ ಹೆಚ್ಚಿನ ಆದಾಯವನ್ನು ‘ಗೊತ್ತಿರುವ ಮೂಲಗಳಿಂದ ಬಂದ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಅಂಥ ದೇಣಿಗೆದಾರರ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಪಕ್ಷಗಳು ನೀಡಬೇಕು. ಇದಕ್ಕಿಂತ ಕಡಿಮೆ ಮೊತ್ತವನ್ನು ‘ಅನಾಮಿಕ ಮೂಲಗಳಿಂದ ಬಂದ ಆದಾಯ’ ಎಂದು ಪರಿಗಣಿಸಲಾಗುತ್ತದೆ ಹಾಗೂ ದೇಣಿಗೆದಾರರ ಹೆಸರು ಬಹಿರಂಗಪಡಿಸುವ ಅಗತ್ಯವಿಲ್ಲ. ಕೇವಲ ವಾರ್ಷಿಕ ಆಡಿಟ್‌ನಲ್ಲಿ ಆದಾಯವನ್ನು ಮಾತ್ರ ಉಲ್ಲೇಖಿಸಬೇಕು.

ಎಲೆಕ್ಟೋರಲ್‌ (ಚುನಾವಣಾ) ಬಾಂಡ್‌ ಅಂದರೇನು?
ಚುನಾವಣಾ ಬಾಂಡ್‌ನ ಈ ಹೊಸ ಅಧಿಸೂಚನೆ ಪ್ರಕಾರ "ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳಿಗೆ ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ" ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ "15 ದಿನಗಳ ಹೆಚ್ಚುವರಿ ಅವಧಿಯನ್ನು" ಒದಗಿಸಲು ಯೋಜನೆಯನ್ನು ತಿದ್ದುಪಡಿ ಮಾಡಿದೆ. "ಅವರು ಯೋಜನೆಯ ವಿರುದ್ಧ ಅಧಿಸೂಚನೆಯನ್ನು ಹೊರಡಿಸುತ್ತಿದ್ದಾರೆ. ಈ ಅಧಿಸೂಚನೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ" ಎಂದು  ಹಿರಿಯ ವಕೀಲ ಅನೂಪ್ ಚೌಧರಿ ಹೇಳಿದರು. ಈ ಮನವಿಗೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್‌ ಸಿಜೆಐ ಚಂದ್ರಚೂಡ್, ನಾವು ಅದನ್ನು ಪಟ್ಟಿ ಮಾಡುತ್ತೇವೆ, ಈ ವಿಷಯದ ವಿಚಾರಣೆ ಬರುತ್ತದೆ ಎಂದು ಹೇಳಿದ್ದಾರೆ. 

ಎಲೆಕ್ಟೋರಲ್ ಬಾಂಡ್ ಎನ್ನುವುದು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‌ನ ಒಂದು ಸಾಧನವಾಗಿದ್ದು, ವ್ಯಕ್ತಿ ಅಥವಾ ಸಂಸ್ಥೆಯು ಭಾರತದ ಪ್ರಜೆಯಾಗಿದ್ದರೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಲ್ಪಟ್ಟಿದ್ದರೆ ಅದನ್ನು ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳ ಸಂಘದಿಂದ ಖರೀದಿಸಬಹುದಾಗಿದೆ.