Source: 
Prajavani
https://www.prajavani.net/india-news/rahul-gandhi-takes-dig-at-bjp-over-reports-of-50-pc-rise-in-its-income-861704.html
Author: 
ಪಿಟಿಐ
Date: 
28.08.2021
City: 
New Delhi

 2019-20ನೇ ಸಾಲಿನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಆದಾಯದಲ್ಲಿ ಶೇಕಡಾ 50ರಷ್ಟು ಏರಿಕೆಯಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಬಿಜೆಪಿ ಆದಾಯವು ಶೇಕಡಾ 50ರಷ್ಟು ಏರಿಕೆಯಾಗಿದೆ. ಹಾಗಿದ್ದರೆ ನಿಮ್ಮದ್ದು?' ಎಂದು ಪ್ರಶ್ನಿಸಿದ್ದಾರೆ.

ಎಡಿಆರ್ ವರದಿ ಪ್ರಕಾರ, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಆದಾಯವು ಶೇಕಡಾ 50ರಷ್ಟು ಏರಿಕೆಯಾಗಿದೆ.

https://twitter.com/RahulGandhi/status/1431475160004038658?ref_src=twsrc...

ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಡುವೆಯೂ ಬಿಜೆಪಿ ಆದಾಯದಲ್ಲಿ ಗಣನೀಯ ಏರಿಕೆಯಾಗಿರುವ ಬಗ್ಗೆ ರಾಹುಲ್ ಗಾಂಧಿ ಆಶ್ಚರ್ಯ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಬಾಂಡ್‌ಗಳಿಂದ ಆಳುವ ಪಕ್ಷಕ್ಕೆ ಹಣದ ಹೊಳೆ ಹರಿದು ಬರುತ್ತಿದೆ. ಇದನ್ನು ವಿರೋಧಿಸಿರುವ ಕಾಂಗ್ರೆಸ್, ಇದರಿಂದಲೇ ಬಿಜೆಪಿ ಅಧಿಕಾರಕ್ಕೇರಲು ನೆರವಾಗಿದೆ ಎಂದು ದೂರಿದೆ.

© Association for Democratic Reforms
Privacy And Terms Of Use
Donation Payment Method