Source: 
Author: 
Date: 
15.12.2018
City: 
ನವದೆಹಲಿ: ಮಧ್ಯಪ್ರದೇಶದ ನೂತನ ಅಸೆಂಬ್ಲಿಯಲ್ಲಿ 187 ಮಂದಿ ಕೋಟ್ಯಾಧೀಶರಿದ್ದು,  94 ಮಂದಿ ಕ್ರಿಮಿನಲ್  ಹಿನ್ನೆಲೆವುಳ್ಳವರಾಗಿದ್ದಾರೆ ಎಂದು ಎಡಿಆರ್ - ಅಸೋಸಿಯೇಷನ್ ಪಾರ್ ಡೆಮಾಕ್ರಟಿಕ್ ರಿಪಾರ್ಮ್ಸ್ ಸಂಸ್ಥೆ ಬಹಿರಂಗಪಡಿಸಿದೆ.
 ಬಿಜೆಪಿಯ 109 ಶಾಸಕರ ಪೈಕಿ 91 ಹಾಗೂ  ಕಾಂಗ್ರೆಸ್ ಪಕ್ಷದ 114 ಶಾಸಕರ ಪೈಕಿ 90 , ಹಾಗೂ ಬಿಎಸ್ಪಿ ಹಾಗೂ ಎಸ್ಪಿಯಿಂದ ತಲಾ 1 ಹಾಗೂ ನಾಲ್ಕು ಪಕ್ಷೇತರ ಅಭ್ಯರ್ಥಿಗಳು 1 ಕೋಟಿಗೂ ಹೆಚ್ಚಿನ ಮೊತ್ತದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಮತ್ತೊಂದೆಡೆ ವಿಜಯ್ ರಾಘವ್ ಗಡ ಕ್ಷೇತ್ರದ  ಬಿಜೆಪಿ ಶಾಸಕ ಸಂಜಯ್ ಸತ್ಯೇಂದ್ರ ಪಠಕ್  ಆಸ್ತಿ   ಮೊತ್ತ 226 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.  ಪಂದಾನಾ ಕ್ಷೇತ್ರದ ಮತ್ತೊಬ್ಬ ಶಾಸಕ ರಾಮ್ ದಾಂಗೊರ್  ಆಸ್ತಿಯ ಒಟ್ಟಾರೇ ಮೊತ್ತ 50. 749 ರೂ ಆಗಿದ್ದು, ಅತ್ಯಂತ ಕಡಿಮೆ ಆಸ್ತಿ ಹೊಂದಿದವರಾಗಿದ್ದಾರೆ.
230 ಸದಸ್ಯ ಬಲದ ಅಸೆಂಬ್ಲಿಯಲ್ಲಿ 94 ಶಾಸಕರ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. 47 ಶಾಸಕರ ಮೇಲೆ ಕೊಲೆಯತ್ನ,  ಮಹಿಳೆಯರ ಮೇಲೆ ದೌರ್ಜನ್ಯದಂತಹ ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ.
ಮುಲ್ತಾಯಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಖದೇವ್ ಪಂಸೆ ಮೇಲೆ ಹತ್ಯೆಗೆ ಸಂಬಂಧಿಸಿದ  ಕೇಸ್ ದಾಖಲಾಗಿರುವ ಬಗ್ಗೆ ಘೋಷಿಸಿಕೊಂಡಿದ್ದಾರೆ.
© Association for Democratic Reforms
Privacy And Terms Of Use
Donation Payment Method