Skip to main content
Source
Kannada Prabha
https://www.kannadaprabha.com/nation/2022/aug/26/national-parties-collected-rs-15077-crore-from-unknown-sources-between-2004-05-and-2020-21-adr-475719.html
Author
Lingaraj Badiger
Date
City
New Delhi

ರಾಷ್ಟ್ರೀಯ ರಾಜಕೀಯ ಪಕ್ಷಗಳು 2004-05 ರಿಂದ 2020-21ರ ನಡುವೆ ಅಪರಿಚಿತ ಮೂಲಗಳಿಂದ ಬರೋಬ್ಬರಿ 15,077.97 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್...

ರಾಷ್ಟ್ರೀಯ ರಾಜಕೀಯ ಪಕ್ಷಗಳು 2004-05 ರಿಂದ 2020-21ರ ನಡುವೆ ಅಪರಿಚಿತ ಮೂಲಗಳಿಂದ ಬರೋಬ್ಬರಿ 15,077.97 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದೆ.

2020-21ರಲ್ಲಿ ಅಪರಿಚಿತ ಮೂಲಗಳಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 690.67 ಕೋಟಿ ರೂಪಾಯಿ ನಿಧಿ ಸಂಗ್ರಹಿಸಿವೆ.

ಈ ವಿಶ್ಲೇಷಣೆಗಾಗಿ ಎಡಿಆರ್ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 27 ಪ್ರಾದೇಶಿಕ ಪಕ್ಷಗಳ ವರದಿಯನ್ನು ಅಧ್ಯಯನ ಮಾಡಿದೆ. 

ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ(ಬಿಜೆಪಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‌ಸಿ), ಅಖಿಲ ಭಾರತ ತೃಣಮೂಲ ಕಾಂಗ್ರೆಸ್(ಎಐಟಿಸಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) (ಸಿಪಿಎಂ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ), ಬಹುಜನ ಸಮಾಜ ಪಕ್ಷ(ಬಿಎಸ್‌ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ ಮಾಹಿತಿಯನ್ನು ಎಡಿಆರ್ ಕಲೆ ಹಾಕಿ ಈ ವರದಿ ಬಿಡುಗಡೆ ಮಾಡಿದೆ.

ಇನ್ನು ಹಲವು ಪ್ರಾದೇಶಿಕ ಪಕ್ಷಗಳಾದ ಆಪ್, ಎಐಎಡಿಎಂಕೆ, ಜೆಡಿಎಸ್, ಜೆಡಿಯು, ಎಐಎಂಐಎಂ, ಸಮಾಜವಾದಿ ಪಾರ್ಟಿ, ಶಿವಸೇನಾ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಆದಾಯ ತೆರಿಗೆ ಇಲಾಖೆಗೆ ನೀಡಿರುವ ಮಾಹಿತಿಯನ್ನು ಹೆಕ್ಕಿ ತೆಗೆಯಲಾಗಿದೆ. 

ರಾಜಕೀಯ ಪಕ್ಷಗಳ ಆದಾಯ ತೆರಿಗೆ ರಿಟರ್ನ್ಸ್(ITR) ಸಲ್ಲಿಕೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆಯ ವಿವರಗಳ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದ್ದು, 2004-05 ರಿಂದ 2020-21 ರ ನಡುವೆ ರಾಷ್ಟ್ರೀಯ ಪಕ್ಷಗಳು 15,077.97 ಕೋಟಿ ರೂ. ಅಪರಿಚಿತ ಮೂಲಗಳು ಸಂಗ್ರಹಿಸಿವೆ.

2020-21ನೇ ಹಣಕಾಸು ವರ್ಷದಲ್ಲಿ ಎಂಟು ರಾಷ್ಟ್ರೀಯ ಪಕ್ಷಗಳು ಅಪರಿಚಿತ ಮೂಲಗಳಿಂದ ರೂ 426.74 ಕೋಟಿ ಹಣ ಸಂಗ್ರಹಿಸಿವೆ ಮತ್ತು 27 ಪ್ರಾದೇಶಿಕ ಪಕ್ಷಗಳು 263.928 ಕೋಟಿ ರೂಪಾಯಿ ನಿಧಿಯನ್ನು ಅಪರಿಚಿತ ಮೂಲಗಳಿಂದ ಪಡೆದಿವೆ" ಎಂದು ಎಡಿಆರ್ ಹೇಳಿದೆ.