Skip to main content
Source
Vijay Karnataka
Date

ರಾಜಕೀಯ ಪಕ್ಷಗಳು 2019-20ನೇ ಸಾಲಿನಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 3,429.56 ಕೋಟಿ ರೂ. ಸಂಗ್ರಹಿಸಿವೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್‌, ಟಿಎಂಸಿ ಮತ್ತು ಎನ್‌ಸಿಪಿ ಈ ನಾಲ್ಕು ಪಕ್ಷಗಳ ಪಾಲು ಶೇ.87.29ರಷ್ಟಿದೆ!

ಈ ಕುರಿತ ಅಂಕಿ-ಅಂಶಗಳನ್ನು ಕಲೆಹಾಕಿರುವ ಪ್ರಜಾಪ್ರಭುತ್ವ ಸುಧಾರಣೆಗಳ ಸಂಘಟನೆ (ಎಡಿಆರ್‌) ಶುಕ್ರವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ. 2019-20ರ ಸಾಲಿನಲ್ಲಿ ಬಿಜೆಪಿಯ ಒಟ್ಟು ಘೋಷಿತ ಆದಾಯ 3,623.28 ಕೋಟಿ ರೂಪಾಯಿ. ಇದೇ ಸಾಲಿನಲ್ಲಿ ಪಕ್ಷ ಮಾಡಿದ ಖರ್ಚಿನ ಬಾಬ್ತು ಕೇವಲ 1,651.022 ಕೋಟಿ ರೂ. (ಶೇ.45.57).

ಕಾಂಗ್ರೆಸ್‌ ಇದೇ ಅವಧಿಯಲ್ಲಿ 682.21 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಇದೇ ಅವಧಿಯಲ್ಲಿ 998.158 ಕೋಟಿ ರೂ. ಖರ್ಚು ಮಾಡಿದೆ. ಅಂದರೆ ಆದಾಯಕ್ಕಿಂತ ಶೇ.46.31ರಷ್ಟು ಅಧಿಕ ಹಣ ಖರ್ಚು ಮಾಡಿದೆ.

ಮೂರನೇ ಹೆಚ್ಚು ಆದಾಯ ಗಳಿಕೆ ಮಾಡಿದ ಪಕ್ಷ ಎನಿಸಿರುವ ಟಿಎಂಸಿ 143.67 ಕೋಟಿ ರೂ. ಸಂಗ್ರಹಿಸಿದೆ. ಇದರಲ್ಲಿ 107.27 ರೂ. ಖರ್ಚು ಮಾಡಿ ಸಮತೋಲನ ಕಾಯ್ದಿಕೊಂಡಿದೆ ಎಂದು ವರದಿ ತಿಳಿಸಿದೆ.

ಬಿಜೆಪಿ ಆದಾಯ ಗಗನಕ್ಕೆ ಜಿಗಿದಿದ್ದರೆ ಕಾಂಗ್ರೆಸ್‌ ಆದಾಯ ಪಾತಾಳದತ್ತ ಮುಖ ಮಾಡಿದೆ. 2018-19ರ ಸಾಲಿನಲ್ಲಿ 918.03 ಕೋಟಿ ರೂ. ಇದ್ದ ಕಾಂಗ್ರೆಸ್‌ ಆದಾಯ 2019-20ರ ವೇಳೆಗೆ 682.21 ಕೋಟಿ ರೂ.ಗೆ ಕುಸಿತ ಕಂಡಿದೆ.