Date
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಶೇ, 92 ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದೆ.
ಕಾಂಗ್ರೆಸ್ ನಿಂದ 218 ಅಭ್ಯರ್ಥಿಗಳ ಘೋಷಣೆಯಾಗಿದ್ದು, ಅದರಲ್ಲಿ ಪುನಾರಾಯ್ಕೆ ಬಯಸಿರುವ 148 ಮಂದಿಯಲ್ಲಿ 134 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು, ಬಿಜೆಪಿಯ 111 ಅಭ್ಯರ್ಥಿಗಳ ಪೈಕಿ 97ಕ್ಕೂ ಹೆಚ್ಚು ಜನ 1 ಕೋಟಿ ರೂ ಮೇಲಿನ ಆಸ್ತಿ ಹೊಂದಿದ್ದಾರೆ, ಜೆಡಿಎಸ್ ಪ್ರಕಟಿಸರುವ 56 ಆಭ್ಯರ್ಥಿಗಳ ಪೈಕಿ 45 ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ.
ಗೋವಿಂದರಾಜನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಅತಿ ಶ್ರೀಮಂತ ಎಂದು ಪರಿಗಣಿಸಲ್ಪಟ್ಟಿದ್ದಾರೆ, 910 ಕೋಟಿ ರೂ, ಆಸ್ತಿ ಘೋಷಮೆ ಮಾಡಿದ್ದಾರೆ, ಹೊಸಕೋಟೆಯ ಎನ್ ನಾಗರಾಜು ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದು, 288 ಕೋಟಿ ರು ಘೋಷಿಸಿದ್ದಾರೆ, ಬಳ್ಳಾರಿಯ ಅನಿಲ್ ಲಾಡ್ 288 ಕೋಟಿ ರು, ಆಸ್ತಿ ಘೋಷಿಸಿ 3ನೇ ಸ್ಥಾನದಲ್ಲಿದ್ದಾರೆ, ಬಿಜೆಪಿಯ ಕೆ,ಆರ್ ಪುರ ಅಭ್ಯರ್ಥಿ ಎನ್ ಎಸ್ ನಂದೀಶ್ ರೆಡ್ಡಿ 118 ಕೋಟಿ ಹಾಗೂ ಬಸವನಗುಡಿಯ ಜೆಡಿಎಸ್ ಅಭ್ಯರ್ಥಿ ಕೆ. ಬಾಗೇಗೌಡ 250 ಕೋಟಿ ರು. ಆಸ್ತಿ ಘೋಷಿಸಿದ್ದಾರೆ.
ಕಾಂಗ್ರೆಸ್ ನ 48 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿದ್ದು, ಅದರಲ್ಲಿ 23 ಮಂದಿ ವಿರುದ್ಧ ಗಂಭೀರ ಆರೋಪ ಪ್ರಕರಣಗಳಿವೆ, ಬಿಜೆಪಿಯ 30 ಅಭ್ಯರ್ಥಿಗಳು ಹಾಗೂ ಜೆಡಿಎಸ್ ನ 9 ಅಭ್ಯರ್ಥಿಗಳ ವಿರುದ್ಧ ಗಂಭೀರ ಆರೋಪಗಳಿದ್ದು, 17 ಅಭ್ಯರ್ಥಿಗಳ ವಿರುದ್ಧ ಸಾಮಾನ್ಯ ಪ್ರಕರಣ ದಾಖಲಾಗಿವೆ ಎಂದು ವರದಿಯಲ್ಲಿ ತಿಳಿಸಿದೆ.