Skip to main content
Source
Kannada Prabha
Date

ದೇಶದ ಒಟ್ಟು 363 ಸಂಸದರು ಮತ್ತು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಒಂದು ವೇಳೆ ಅವರ ವಿರುದ್ಧದ ಆರೋಪ ಸಾಬೀತಾದರೆ ಜನಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ ಅವರನ್ನು ಅನರ್ಹಗೊಳಿಸಲಾಗುತ್ತದೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿನ ಮೂವತ್ತೊಂಬತ್ತು ಸಚಿವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಇವುಗಳನ್ನು ಅನರ್ಹತೆ ಕುರಿತ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 8 ರಲ್ಲಿ ಸೇರಿಸಲಾಗಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ 542 ಲೋಕಸಭಾ ಸದಸ್ಯರು ಮತ್ತು 1,953 ಶಾಸಕರ ಅಫಿಡವಿಟ್ ಗಳನ್ನು 2019 ರಿಂದ 2021 ರವರೆಗೆ ವಿಶ್ಲೇಷಿಸಿದೆ.

2,495 ಸಂಸದರು/ಶಾಸಕರಲ್ಲಿ 363(ಶೇಕಡಾ 15 ರಷ್ಟು) ಸಂಸದರು ಮತ್ತು ಶಾಸಕರು ತಾವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. 

ಅವರಲ್ಲಿ 296 ಶಾಸಕರು ಮತ್ತು 67 ಸಂಸದರು ಸೇರಿದ್ದಾರೆ.

ಪಕ್ಷಗಳ ಪೈಕಿ, ಬಿಜೆಪಿಯು ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 83 ಸಂಸದರು/ಶಾಸಕರನ್ನು ಹೊಂದಿದೆ, ನಂತರ ಕಾಂಗ್ರೆಸ್ 47 ಮತ್ತು ಟಿಎಂಸಿ 25 ಶಾಸಕರು, ಸಂಸದರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಎಡಿಆರ್ ಹೇಳಿದೆ.