ನವದೆಹಲಿ, ಏಪ್ರಿಲ್ 24: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದೆ. ಈ ಹಂತದಲ್ಲಿ ಒಟ್ಟಾರೆ, 210 ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ.ಲೋಕಸಭೆ ಚುನಾವಣೆ ವಿಶೇಷ ಪುಟ ಒಟ್ಟಾರೆ, 928 ಅಭ್ಯರ್ಥಿಗಳ ಪೈಕಿ 210(23%) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. 928 ಅಭ್ಯರ್ಥಿಗಳ ಪೈಕಿ 158(17%) ಅಭ್ಯರ್ಥಿಗಳ ಮೇಲೆ ಗುರುತರ ಕ್ರಿಮಿನಲ್ ಕೇಸ್ ಗಳಿವೆ.4ನೇ ಹಂತದ ಚುನಾವಣೆ: ಕಮಲ್ ನಾಥ್ ಮಗ ಅತ್ಯಂತ ಸಿರಿವಂತ ಅಭ್ಯರ್ಥಿ 12 ಅಭ್ಯರ್ಥಿಗಳ ಅಪರಾಧಿಗಳಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. 5 ಅಭ್ಯರ್ಥಿಗಳ ಮೇಲೆ ಐಪಿಸಿ 302 ಅಡಿಯಲ್ಲಿ ಕೊಲೆ ಕೇಸುಗಳಿವೆ.24 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ 307) ಕೇಸ್ ಗಳಿವೆ.4 ಅಭ್ಯರ್ಥಿಗಳು ಕಿಡ್ನಾಪ್ ಕೇಸ್(ಐಪಿಎಸ್ 364 ಎ) ಎದುರಿಸುತ್ತಿದ್ದಾರೆ. 21 ಅಭ್ಯರ್ಥಿಗಳು ಮಹಿಳೆಗೆ ಕಿರುಕುಳ (ಐಪಿಸಿ 354) ನೀಡಿದ ಆರೋಪ ಹೊತ್ತುಕೊಂಡಿದ್ದಾರೆ. ಕೆಲವರ ವಿರುದ್ಧ ಐಪಿಸಿ ಸೆಕ್ಷನ್ 498 ಎ ಅನ್ವಯ ಕೇಸ್ ಗಳಿವೆ. 16 ಅಭ್ಯರ್ಥಿಗಳ ವಿರುದ್ಧ ದ್ವೇಷಭಾಷಣದ ಕೇಸ್ ಗಳಿವೆ.ಚಾಂದಿನಿ ಚೌಕ್ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಆಸ್ತಿ ವಿವರ ಪಕ್ಷವಾರು ಅಂಕಿ ಅಂಶದಲ್ಲಿ ಬಿಜೆಪಿಯ 57 ಮಂದಿ ಪೈಕಿ 24(44%), ಕಾಂಗ್ರೆಸ್ಸಿನ 18(32%), ಬಿಎಸ್ಪಿಯ 54ರ ಪೈಕಿ 11(20%), ಎಸ್ ಎಚ್ಎಸ್ ನ 21ರಪೈಕಿ 12(57%) ಹಾಗೂ 347 ಪಕ್ಷೇತರರ ಪೈಕಿ 60(17%) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. ಏಪ್ರಿಲ್ 29ರಂದು 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಮತದಾನ ನಿಗದಿಯಾಗಿದ್ದು, 37 ಸೂಕ್ಷ್ಮ ಕ್ಷೇತ್ರಗಳಾಗಿವೆ.