Skip to main content
Date
City
New Delhi
2013-14 ರಿಂದ 2016-17ರ ನಡುವೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಒಂಭತ್ತು ಟ್ರಸ್ಟ್ ಗಳು ಸರಿ ಸುಮಾರು 637.55 ಕೋಟಿ ರುಪಾಯಿ ದೇಣಿಗೆ ನೀಡಿದ್ದು ಇದರಲ್ಲಿ ಬಹುಪಾಲು ಬಿಜೆಪಿ ಪಕ್ಷ ಪಡೆದಿದೆ. 
ಒಟ್ಟಾರೆ ಹಣದಲ್ಲಿ ಬಿಜೆಪಿ 488.94 ಕೋಟಿ ರುಪಾಯಿ ಪಡೆದರೇ, ಕಾಂಗ್ರೆಸ್ ಕೇವಲ 86.65 ಕೋಟಿ ಮಾತ್ರ ದೇಣಿಗೆ ಪಡೆದಿದೆ ಎಂಬ ವರದಿ ಬಹಿರಂಗಗೊಂಡಿದೆ. 
ಒಂಭತ್ತು ಟ್ರಸ್ಟ್ ಗಳು ನೀಡಿರುವ ಹಣದಲ್ಲಿ ಐದು ರಾಷ್ಟ್ರೀಯ ಪಕ್ಷಗಳು ಶೇಕಡ 92.30(588.44 ಕೋಟಿ) ದೇಣಿಗೆ ಪಡೆದರೇ, 16 ಪ್ರಾದೇಶಕ ಪಕ್ಷಗಳು ಶೇಕಡ 7.70ರಷ್ಟು(49.09 ಕೋಟಿ) ದೇಣಿಗೆ ಪಡೆದಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿಯಲ್ಲಿ ತಿಳಿಸಿದೆ. 
ರಾಜಕೀಯ ಪಕ್ಷಗಳು 2013-14ರಲ್ಲಿ 85.37 ಕೋಟಿ, 2014-15ರಲ್ಲಿ 177.40 ಕೋಟಿ, 2015-16ರಲ್ಲಿ 49.50 ಕೋಟಿ, 2016-17ರಲ್ಲಿ 325.27 ಕೋಟಿ ರುಪಾಯಿ ದೇಣಿಗೆ ಪಡೆದಿವೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಿದೆ. 
Posted by: VS | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
 ನೋಂದಣಿ ಉಚಿತ!

Topics : Political partiesBJPCongressDonationರಾಜಕೀಯ ಪಕ್ಷಗಳುಬಿಜೆಪಿಕಾಂಗ್ರೆಸ್ದೇಣಿಗೆ
English summary
Nine electoral trusts have donated Rs 637.54 crore to political parties between 2013-14 and 2016-17, with the BJP receiving Rs 488.94 crore and the Congress Rs 86.65 crore, a report said today.