Skip to main content
Source
Etv Bharat
Date
City
New Delhi

2020-21ನೇ ಹಣಕಾಸು ವರ್ಷದಲ್ಲಿ ಎಂದು ರಾಷ್ಟ್ರೀಯ ಪಕ್ಷಗಳು ಒಟ್ಟಾರೆ 1373.783 ಕೋಟಿ ರೂಪಾಯಿ ಆದಾಯ ಘೋಷಿಸಿವೆ. ಇದರಲ್ಲಿ ಬಿಜೆಪಿಯ ಪಾಲು ಸುಮಾರು ಶೇ.55ರಷ್ಟಿದೆ ಎಂದು ಸರಕಾರೇತರ ಚುನಾವಣಾ ವಿಶ್ಲೇಷಕ ಸಂಸ್ಥೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್​ (ಎಡಿಆರ್​) ವರದಿ ಮಾಡಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷ (ಬಿಎಸ್​ಪಿ), ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸಿಸ್ಟ್ (ಸಿಪಿಎಂ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಎಐಟಿಸಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್​ಪಿಪಿ) ಇವೇ ಆ 8 ಪಕ್ಷಗಳಾಗಿವೆ.

ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ ಬಿಜೆಪಿ ಅತಿ ಹೆಚ್ಚು ಅಂದರೆ 1373.783 ಕೋಟಿ ರೂಪಾಯಿ ಆದಾಯ ಘೋಷಿಸಿದೆ. 285.765 ಕೋಟಿ ರೂಪಾಯಿ ಆದಾಯದೊಂದಿಗೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ ಎಂದು ಎಡಿಆರ್ ತಿಳಿಸಿದೆ.

2019-20 ಮತ್ತು 2020-21ನೇ ಹಣಕಾಸು ವರ್ಷಗಳಲ್ಲಿ ಬಿಜೆಪಿ ಆದಾಯವು ಶೇ.79.24ರಷ್ಟು ಕುಸಿತ ಕಂಡಿದೆ. ಅದೇ ರೀತಿ ಇದೇ ಅವಧಿಯಲ್ಲಿ ಕಾಂಗ್ರೆಸ್ ಆದಾಯವು ಶೇ.58.11ರಷ್ಟು ಕುಸಿತ ಕಂಡಿದೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಲಾಗಿದೆ.