2023-24ನೇ ಸಾಲಿನಲ್ಲಿ 4340 ಕೋಟಿ ರು. ಆದಾಯದೊಂದಿಗೆ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್ 1225 ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದೆ.
ನವದೆಹಲಿ: 2023-24ನೇ ಸಾಲಿನಲ್ಲಿ 4340 ಕೋಟಿ ರು. ಆದಾಯದೊಂದಿಗೆ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್ 1225 ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿರುವ ವರದಿ ಅನ್ವಯ, 2023-24ನೇ ಸಾಲಿನಲ್ಲಿ ಬಿಜೆಪಿ 4340 ಕೋಟಿ ರು. ಆದಾಯ ಸಂಗ್ರಹಿಸಿತ್ತು. ಇದು 6 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಶೇ.74ರಷ್ಟು ಪಾಲು. ಇನ್ನು ಬಿಜೆಪಿ ತನ್ನ ಆದಾಯದಲ್ಲಿ ಶೇ. ಶೇ.50.96ರಷ್ಟು ಅಂದರೆ 2211 ಕೋಟಿ ರು.ಗಳನ್ನು ಚುನಾವಣೆಗೆ ಖರ್ಚು ಮಾಡಿದ್ದು, ಕಾಂಗ್ರೆಸ್ ತನ್ನ 1225 ಕೋಟಿ ರು. ಆದಾಯದಲ್ಲಿ ಶೇ.83.69ರಷ್ಟು ಅಂದರೆ 1025 ಕೋಟಿ ರು. ವೆಚ್ಚ ಮಾಡಿದೆ. ಈ ಆದಾಯಗಳ ಬಹುಪಾಲು ರದ್ದಾಗಿರುವ ಚುನಾವಣಾ ಬಾಂಡ್‌ನದ್ದೇ ಇದೆ ಎಂದು ಎಡಿಆರ್ ಹೇಳಿದೆ.
ಠೇವಣಿ ವಿಮೆ ಮೊತ್ತ ₹5 ಲಕ್ಷಕ್ಕಿಂತ ಮೇಲೇರಿಸಲು ಚಿಂತನೆ : ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳು
ನವದೆಹಲಿ: ಬ್ಯಾಂಕ್ ಅಥವಾ ಸಹಕಾರಿ ಸಂಸ್ಥೆಗಳು ನಷ್ಟಕ್ಕೊಳಗಾದ ವೇಳೆ ಠೇವಣಿ ಇಟ್ಟ ಗ್ರಾಹಕರಿಗೆ ನೆರವಾಗಲು ಇರುವ ಠೇವಣಿ ವಿಮೆ ಮೊತ್ತವನ್ನು ಹಾಲಿ ಇರುವ 5 ಲಕ್ಷ ರು.ಗಿಂತ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರ ಮುಂದಿದೆ ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕ್ ಹಗರಣದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಣಕಾಸು ಇಲಾಖೆ ಕಾರ್ಯದರ್ಶಿ ನಾಗರಾಜು. ಠೇವಣಿ ವಿಮೆ ಮೊತ್ತ ಹೆಚ್ಚಳದ ಪ್ರಸ್ತಾಪ ಸರ್ಕಾರದ ಮುಂದಿದೆ. ಸರ್ಕಾರ ಅದನ್ನು ಅನುಮೋದಿಸಿದ ಬಳಿಕ ಈ ಕುರಿತು ಪ್ರಕಟಣೆ ಹೊರಡಿಸಲಾಗುವುದು ಎಂದರು. 2020ರವರೆಗೂ ಠೇವಣಿ ವಿಮೆ ಮೊತ್ತ ಕೇವಲ 1 ಲಕ್ಷ ರು. ಇತ್ತು.
2020ರಲ್ಲಿ ಪಿಎಂಸಿ ಬ್ಯಾಂಕ್ ಹಗರಣದ ಬಳಿಕ ಅದನ್ನು5 ಲಕ್ಷ ರು.ಗೆ ಹೆಚ್ಚಿಸಲಾಗಿತ್ತು. ಈ ವಿಮೆಯ ಪ್ರೀಮಿಯಂ ಹಣವನ್ನು ಹಣಕಾಸು ಸಂಸ್ಥೆಗಳೇ ಪಾವತಿಸುತ್ತವೆ. ಗ್ರಾಹಕರ ಠೇವಣಿ ಹಣಕ್ಕೆ ಖಾತರಿ ನೀಡಲು ಈ ಯೋಜನೆ ಆರಂಭಿಸಲಾಗಿದೆ. ಬ್ಯಾಂಕ್ ನಷ್ಟಕ್ಕೀಡಾದ ವೇಳೆ ಗ್ರಾಹಕರಿಗೆ ಗರಿಷ್ಠ 5 ಲಕ್ಷ ರು. ವಿಮೆ ಹಣ ಸಿಗುತ್ತದೆ.