Source: 
TV9 Kannada
https://tv9kannada.com/business/adr-report-indias-richest-mlas-list-top-3-are-from-karnataka-dk-shivakumar-in-top-snvs-626658.html
Author: 
ಸುಗ್ಗನಹಳ್ಳಿ ವಿಜಯಸಾರಥಿ
Date: 
20.07.2023
City: 
Bengaluru

DK Shivakumar: ದೇಶದಲ್ಲಿರುವ ಶಾಸಕರಲ್ಲಿ 88 ಮಂದಿ ಬಿಲಿಯನೇರ್​ಗಳಿದ್ದಾರೆ. ಈ ಪೈಕಿ ಕರ್ನಾಟಕದವರೇ 32 ಮಂದಿ ಇದ್ದಾರೆ. ಭಾರತದ ಅಗ್ರ 20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು 12 ಮಂದಿ ಇದ್ದಾರೆ. ಮೊದಲ ಮೂರು ಸ್ಥಾನದಲ್ಲೂ ಕರ್ನಾಟಕದವರಿದ್ದಾರೆ.

ಎಡಿಆರ್ ಮತ್ತು ಎನ್​ಇಡಬ್ಲ್ಯೂ ಬಿಡುಗಡೆ ಮಾಡಿದ ಜನಪ್ರತಿನಿಧಿಗಳ ಮಾಹಿತಿ ವರದಿಯೊಂದರಲ್ಲಿ (ADR Report) ದೇಶದ ಶಾಸಕರ ಆಸ್ತಿಪಾಸ್ತಿಸಾಲ ಇತ್ಯಾದಿ ವಿವರ ಬಹಿರಂಗವಾಗಿದೆಈ ವರದಿ ಪ್ರಕಾರ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ಭಾರತದ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆಕುತೂಹಲವೆಂದರೆ ಶ್ರೀಮಂತ ಶಾಸಕರು ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 100 ಕೋಟಿ ರೂಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಬಿಲಿಯನೇರ್ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರು 32 ಮಂದಿ ಇದ್ದಾರೆದೇಶದ ಯಾವ ರಾಜ್ಯದಲ್ಲೂ ಇಷ್ಟೊಂದು ಬಿಲಿಯನೇರ್ ಶಾಸಕರು ಇಲ್ಲದೇಶದ ಮೊದಲ ಮೂರು ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇಹಾಗೆಯೇಅಗ್ರ 20 ಸಿರಿವಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರೇ 12 ಮಂದಿ ಇದ್ದಾರೆಇದೊಂದು ಅಪೂರ್ವ ಮತ್ತು ಮುಜುಗರದ ದಾಖಲೆ ಎನಿಸಿದೆಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಲಾಗಿರುವ ಅಂಶಗಳನ್ನು ಆಧರಿಸಿ ಎಡಿಆರ್ ಮತ್ತು ಎನ್​ಇಡಬ್ಲ್ಯೂ ಈ ಪಟ್ಟಿ ಪ್ರಕಟಿಸಿದೆ.

ಸಾವಿರ ಕೋಟಿ ರೂಗೂ ಹೆಚ್ಚು ಆಸ್ತಿ ಇರುವ ಮೂವರು ಕನ್ನಡಿಗ ಶಾಸಕರು

ದೇಶದ ಅತಿಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಕರ್ನಾಟಕದವರದ್ದೇಡಿಕೆ ಶಿವಕುಮಾರ್ಕೆಎಚ್ ಪುಟ್ಟಸ್ವಾಮಿ ಗೌಡ ಮತ್ತು ಪ್ರಿಯಾಕೃಷ್ಣ ಅವರು ಮೊದಲ ಮೂರು ಸ್ಥಾನದಲ್ಲಿದ್ದಾರೆಈ ಬಾರಿ ಅಚ್ಚರಿ ಮೂಡಿಸಿದ್ದು ಪುಟ್ಟಸ್ವಾಮಿಗೌಡರದ್ದುಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಪುಟ್ಟಸ್ವಾಮಿಗೌಡ ಅವರು ತಮ್ಮ ಬಳಿ 1,267 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆಡಿಕೆ ಶಿವಕುಮಾರ್ 1,413 ಕೋಟಿ ರೂ ಘೋಷಿತ ಆದಾಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆಕಾಂಗ್ರೆಸ್ ಪಕ್ಷದ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರ ಘೋಷಿತ ಆಸ್ತಿ 1,156 ಕೋಟಿ ರೂ ಇದೆ.

ದೇಶದ ಟಾಪ್20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು ಮತ್ತವರ ಘೋಷಿತ ಆಸ್ತಿಮೌಲ್ಯ

  • ಡಿಕೆ ಶಿವಕುಮಾರ್ಕಾಂಗ್ರೆಸ್: 1,413ಕೋಟಿ ರೂ
  • ಕೆಎಚ್ ಪುಟ್ಟಸ್ವಾಮಿಗೌಡಪಕ್ಷೇತರ: 1,267 ಕೋಟಿ ರೂ
  • ಪ್ರಿಯಾಕೃಷ್ಣಕಾಂಗ್ರೆಸ್: 1,156 ಕೋಟಿ ರೂ
  • ಬಿಎಸ್ ಸುರೇಶಕಾಂಗ್ರೆಸ್: 648 ಕೋಟಿ ರೂ
  • ಎನ್.ಹ್ಯಾರಿಸ್ಕಾಂಗ್ರೆಸ್: 439 ಕೋಟಿ ರೂ
  • ಎಚ್.ಕೆಸುರೇಶ್ಬಿಜೆಪಿ: 435 ಕೋಟಿ ರೂ
  • ಆರ್.ವಿದೇಶಪಾಂಡೆಕಾಂಗ್ರೆಸ್: 363 ಕೋಟಿ ರೂ
  • ಎಂಆರ್ ಮಂಜುನಾಥ್ಜೆಡಿಎಸ್: 316 ಕೋಟಿ ರೂ
  • ಎಸ್.ಎನ್ಸುಬ್ಬಾರೆಡ್ಡಿಕಾಂಗ್ರೆಸ್: 313 ಕೋಟಿ ರೂ
  • ಶಾಮನೂರು ಶಿವಶಂಕರಪ್ಪಕಾಂಗ್ರೆಸ್: 312 ಕೋಟಿ ರೂ
  • ಎಂ ಕೃಷ್ಣಪ್ಪಕಾಂಗ್ರೆಸ್: 296 ಕೋಟಿ ರೂ
  • ಮುನಿರತ್ನಬಿಜೆಪಿ: 293 ಕೋಟಿ ರೂ

ಅತಿಹೆಚ್ಚು ಬಿಲಿಯನೇರ್ ಶಾಸಕರಿರುವ ರಾಜ್ಯಗಳು

ಎಡಿಆರ್ ಒಟ್ಟು 4001 ಶಾಸಕರ ಘೋಷಿತ ಆಸ್ತಿವಿವರಗಳನ್ನು ಅವಲೋಕಿಸಿದ್ದು ನೂರ ಕೋಟಿ ರೂಗೂ ಹೆಚ್ಚು ಮೊತ್ತದ ಆಸ್ತಿಗಳನ್ನು 88 ಶಾಸಕರು ಹೊಂದಿರುವ ಸಂಗತಿಯನ್ನ ಬೆಳಕಿಗೆ ತಂದಿದೆಇದರಲ್ಲಿ ಹೆಚ್ಚಿನವರು ಕರ್ನಾಟಕದವರೇವಿವಿಧ ರಾಜ್ಯಗಳಲ್ಲಿ ಎಷ್ಟೆಷ್ಟು ಬಿಲಿಯನೇರ್​ಗಳಿದ್ದಾರೆಇಲ್ಲಿದೆ ಪಟ್ಟಿ:

  1. ಕರ್ನಾಟಕ: 32
  2. ಮಹಾರಾಷ್ಟ್ರ: 12
  3. ಆಂಧ್ರಪ್ರದೇಶ: 10
  4. ಮಧ್ಯಪ್ರದೇಶ: 6
  5. ಗುಜರಾತ್: 5
  6. ತಮಿಳುನಾಡು: 4
  7. ಅರುಣಾಚಲಪ್ರದೇಶ: 4
  8. ರಾಜಸ್ಥಾನ: 3
  9. ಪಂಜಾಬ್: 2
  10. ಹಿಮಾಚಲಪ್ರದೇಶ: 2
  11. ಉತ್ತರಪ್ರದೇಶ: 1
  12. ಮೇಘಾಲಯ: 1
  13. ನಾಗಾಲ್ಯಾಂಡ್: 1
  14. ದೆಹಲಿ: 1
  15. ಹರ್ಯಾಣ: 1
  16. ಛತ್ತೀಸ್​ಗಡ: 1
  17. ತೆಲಂಗಾಣ: 1
  18. ಅಸ್ಸಾಂ: 1
© Association for Democratic Reforms
Privacy And Terms Of Use
Donation Payment Method