Skip to main content
Source
Prajavani
Author
ಶಮಿನ್‌ ಜಾಯ್‌
Date
City
New Delhi

ಬಿಜೆಪಿಯೇ ಶ್ರೀಮಂತ; ಕಾಂಗ್ರೆಸ್‌ ಆದಾಯದಲ್ಲಿ ಏರಿಕೆ

2023–24ನೇ ಹಣಕಾಸು ವರ್ಷದಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಒಟ್ಟು ₹5,820 ಕೋಟಿ ಆದಾಯ ಗಳಿಸಿರುವುದಾಗಿ ಘೋಷಿಸಿಕೊಂಡಿವೆ. ಈ ಪೈಕಿ ಬಿಜೆಪಿಯ ಆದಾಯವು ಒಟ್ಟು ₹4,340 ಕೋಟಿ. ಅಂದರೆ ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ಶೇಕಡ 75ರಷ್ಟಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆಯ ವರದಿ ತಿಳಿಸಿದೆ.

2022–23ನೇ ಹಣಕಾಸು ವರ್ಷದಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಒಟ್ಟು ₹3,077 ಕೋಟಿ ಆದಾಯ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದವು. ಈ ಪೈಕಿ ಬಿಜೆಪಿಯ ಆದಾಯವು ಒಟ್ಟು ₹2,361 ಕೋಟಿಯಷ್ಟಿತ್ತು. ಆದರೆ, ಈ ಬಾರಿ ಬಿಜೆಪಿಯ ಆದಾಯವು ಶೇ 83.85ರಷ್ಟು ಹೆಚ್ಚಾಗಿದೆ ಎಂದು ಎಡಿಆರ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತಿ ಹೆಚ್ಚು ಆದಾಯ ಇರುವ ಎರಡನೇ ಪಕ್ಷವಾಗಿ ಕಾಂಗ್ರೆಸ್ ಗುರುತಿಸಿಕೊಂಡಿದೆ. ಈ ಪಕ್ಷವು 2023–24ನೇ ಹಣಕಾಸು ವರ್ಷದಲ್ಲಿ ₹1,225 ಕೋಟಿ ಆದಾಯ ಗಳಿಸಿದೆ. 2022-23ನೇ ಸಾಲಿನಲ್ಲಿ ₹772.74 ಕೋಟಿಯಷ್ಟಿತ್ತು.

ಈ ಬಾರಿ ಸಿಪಿಐ(ಎಂ) ₹167.63 ಕೋಟಿ ಆದಾಯ ಘೋಷಿಸಿದ್ದು, ಬಿಎಸ್‌ಪಿ ₹64.77 ಕೋಟಿ, ಎಎಪಿ ₹22.68 ಕೋಟಿ ಮತ್ತು ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌‍ಪಿಪಿ) ₹22.44 ಲಕ್ಷ ಆದಾಯ ಗಳಿಸಿದೆ.

ಸ್ವಯಂಪ್ರೇರಿತ ಕೊಡುಗೆಯಾಗಿ ಬಿಜೆಪಿ ₹3,967.14 ಕೋಟಿ, ಕಾಂಗ್ರೆಸ್ ₹11,129 ಕೋಟಿ, ಸಿಪಿಐ(ಎಂ) ₹74.86 ಕೋಟಿ, ಎಎಪಿ ₹22.13 ಕೋಟಿ ಮತ್ತು ಎನ್‌ಪಿಪಿ ₹17.69 ಲಕ್ಷ ಗಳಿಸಿದೆ. ಇದರಲ್ಲಿ ಬಿಜೆಪಿ ₹1,685.62 ಕೋಟಿ ಅಥವಾ ಒಟ್ಟು ಆದಾಯದ ಶೇ 38.84ರಷ್ಟು ಚುನಾವಣಾ ಬಾಂಡ್‌ಗಳ ಮೂಲಕ ಪಡೆದರೆ, ಕಾಂಗ್ರೆಸ್ ₹828.36 ಕೋಟಿ (ಶೇ 67.61) ಗಳಿಸಿದೆ. ಎಎಪಿ ಚುನಾವಣಾ ಬಾಂಡ್‌ಗಳ ಮೂಲಕ ₹10.15 ಕೋಟಿ ಪಡೆದಿರುವುದಾಗಿ ಘೋಷಿಸಿದೆ. ಉಳಿದಂತೆ ಸಿಪಿಐ(ಎಂ), ಬಿಎಸ್‌ಪಿ ಮತ್ತು ಎನ್‌ಸಿಪಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ಹಣ ಸ್ವೀಕರಿಸಿಲ್ಲ.

ಬಿಜೆಪಿಯ ಮತ್ತೊಂದು ಪ್ರಮುಖ ಆದಾಯದ ಮೂಲವೆಂದರೆ ಠೇವಣಿಗಳ ಮೇಲಿನ ಬಡ್ಡಿ ₹369 ಕೋಟಿ ಆಗಿದ್ದರೆ, ಕೂಪನ್‌ಗಳನ್ನು ನೀಡುವ ಮೂಲಕ ಕಾಂಗ್ರೆಸ್ ₹58.55 ಕೋಟಿ ಸಂಗ್ರಹಿಸಿದೆ. ಪಕ್ಷದ ಚಂದಾದಾರಿಕೆಯ ಮೂಲಕ ಸಿಪಿಐ(ಎಂ) ₹49.08 ಕೋಟಿ ಗಳಿಸಿದ್ದರೆ, ಬಿಎಸ್‌ಪಿ ಬ್ಯಾಂಕ್ ಬಡ್ಡಿ ಮೂಲಕ ₹38.18 ಕೋಟಿ ಗಳಿಸಿದೆ.

ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಆದಾಯದಲ್ಲಿ ಹೆಚ್ಚಳ ಕಂಡರೆ, ಎಎಪಿ, ಎನ್‌ಪಿಪಿ ಮತ್ತು ಬಿಎಸ್‌ಪಿ ಕೂಡ 2022-23ಕ್ಕೆ ಹೋಲಿಸಿದರೆ ಆದಾಯದಲ್ಲಿ ಕುಸಿತ ದಾಖಲಿಸಿವೆ.


abc