Skip to main content
Source
Kannadaplanet
Date

ನವದೆಹಲಿ: 2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ 1,494 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇದು ಆದಾಯದ ಶೇ. 44.56 ರಷ್ಟಾಗಿದೆ. ಸ್ವಯಂಸೇವಾಸಂಸ್ಥೆ ಅಸೋಸೊಯೇಷನ್‌ ಫಾರ್‌ ಡೆಮಾಕ್ರಕಟಿಕ್‌ ರಿಫಾರ್ಮ್ಸ್‌ (ಎಡಿಆರ್) ಈ ಮಾಹಿತಿಯನ್ನು ಇಂದು ಹಂಚಿಕೊಂಡಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸೇರಿ ಒಟ್ಟು 32 ಪಕ್ಷಗಳ ಖರ್ಚನ್ನು ಎಡಿಆರ್ ವಿಶ್ಲೇಷಣೆಗೊಳಪಡಿಸಿದೆ.

ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ತನ್ನ ಖರ್ಚಿನ ಶೇ 18.5ರಷ್ಟು (ರೂ.620 ಕೋಟಿ) 2024ರ ಲೋಕಸಭೆ ಚುನಾವಣೆಗೆ ವೆಚ್ಚ ಮಾಡಿದೆ. 2024ರಲ್ಲಿ ನಡೆದ ಲೋಕಸಭೆ ಚುನಾವಣೆ ಹಾಗೂ ಅಂಧ್ರಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಈ 32 ಪಕ್ಷಗಳು ರೂ. 3,352.81 ಕೋಟಿ ಖರ್ಚು ಮಾಡಿವೆ.

ರಾಷ್ಟ್ರೀಯ ಪಕ್ಷಗಳು ರೂ. 2,204 ಕೋಟಿ ಖರ್ಚು ಮಾಡಿದ್ದು, ಇದು ಅವುಗಳ ಒಟ್ಟು ಆದಾಯದ ಶೇ. 65.75ಕ್ಕೆ ಸಮವಾಗಿದೆ. ರಾಷ್ಟ್ರೀಯ ಪಕ್ಷಗಳು ರೂ. 6.930.246 ಕೋಟಿ (ಶೇ. 93.08) ದೇಣಿಗೆ ಸಂಗ್ರಹಿಸಿದ್ದು, ಪ್ರಾದೇಶಿಕ ಪಕ್ಷಗಳಿಗೆ 515.32 ಕೋಟಿ (ಶೇ.6.92%) ದೇಣಿಗೆ ಲಭಿಸಿದೆ.

abc