Skip to main content
Source
Prajavani
Date

2023–24ನೇ ಆರ್ಥಿಕ ವರ್ಷದಲ್ಲಿಯೂ ಬಿಜೆಪಿಯೇ ಅಧಿಕ ಪ್ರಮಾಣದ ದೇಣಿಗೆ ಸಂಗ್ರಹಿಸಿದೆ. ವಿವಿಧ ರಾಷ್ಟ್ರೀಯ ಪಕ್ಷಗಳಿಂದ ಒಟ್ಟು ₹2,544.28 ಕೋಟಿ ದೇಣಿಗೆ ಸಂಗ್ರಹವಾಗಿದೆ. ಇದರಲ್ಲಿನ ಸಿಂಹ ಪಾಲು ಅಂದರೆ, ₹2,244 ಕೋಟಿ ದೇಣಿಗೆಯನ್ನು ಬಿಜೆಪಿ ಒಂದೇ ಸಂಗ್ರಹಿಸಿದೆ. ಕಾಂಗ್ರೆಸ್‌ ಪಕ್ಷದ ದೇಣಿಗೆ ಸಂಗ್ರಹವು ಏರಿಕೆ ಕಂಡಿದೆ.

ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಕಾಂಗ್ರೆಸ್‌ಗೆ ದೊರೆತ ದೇಣಿಗೆ ಮೊತ್ತದ ಹೋಲಿಕೆಯಲ್ಲಿ ಪಕ್ಷದ ದೇಣಿಗೆ ಸಂಗ್ರಹವು ಶೇ 252ರಷ್ಟು ಏರಿಕೆಯಾಗಿದೆ. ಆದರೆ, ಕಾಂಗ್ರೆಸ್‌ಗೆ ಹೋಲಿಸಿಕೊಂಡರೆ, ಬಿಜೆಪಿಯ ದೇಣಿಗೆ ಸಂಗ್ರಹದ ಏರಿಕೆ ಪ್ರಮಾಣವು ಕಡಿಮೆ (ಶೇ 211) ಇದೆ. ಆಮ್‌ ಆದ್ಮಿ ಪಕ್ಷದ ದೇಣಿಗೆ ಸಂಗ್ರಹ ಮಾತ್ರ ತೀವ್ರ ಕುಸಿತ ಕಂಡಿದೆ.

ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯನ್ನು ಸಂಗ್ರಹಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ಸಿದ್ಧಪಡಿಸಿದ್ದು, ಇದನ್ನು ಸೋಮವಾರ ಬಿಡುಗಡೆ ಮಾಡಿದೆ.


abc