Skip to main content
Source
Prajavani
Date
City
New Delhi

ನವದೆಹಲಿ: 2025ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ₹281.31 ಕೋಟಿ ದೇಣಿಗೆ ಸಂಗ್ರಹಿಸಿದ್ದು, ಚುನಾವಣೆ ವೇಳೆ ₹193.47 ಕೋಟಿ ವೆಚ್ಚ ಮಾಡಿವೆ. ಖರ್ಚಿನಲ್ಲಿ ಪ್ರಚಾರ ಕಾರ್ಯಕ್ಕೆ ದೊಡ್ಡ ಮೊತ್ತ ಬಳಸಲಾಗಿದೆ ಎಂದು ‘ಅಸೋಸಿಯೇಟೆಡ್‌ ಫಾರ್‌ ಡೆಮಾಕ್ರಟಿಕ್‌ ರೀಫಾರ್ಮ್ಸ್‌’ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಆಮ್‌ಆದ್ಮಿ ಪಕ್ಷ, ಬಿಎಸ್‌ಪಿ ಹಾಗೂ ಸಿಪಿಐ(ಎಂ) ಹಾಗೂ ಪ್ರಾದೇಶಿಕ ಪಕ್ಷಗಳಾದ ಆರ್‌ಜೆಡಿ, ಜೆಡಿಯು, ಎಲ್‌ಜೆಪಿ (ರಾಮ್‌ವಿಲಾಸ್‌) ಎಐಎಂಐಎಂ ಹಾಗೂ ಸಿಪಿಐ ಪಕ್ಷಗಳ ಖಚ್ಚಿನ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ.

ಒಟ್ಟು 10 ಪಕ್ಷಗಳು ₹ 281.323 ದೇಣಿಗೆ ಸಂಗ್ರಹಿಸಿದ್ದು, ₹193.466 ಖರ್ಚು ಮಾಡಿವೆ ಎಂದು ತಿಳಿಸಿವೆ.

ಒಟ್ಟು ಖರ್ಚಿನಲ್ಲಿ ₹100.429 ಕೋಟಿ ಪ್ರಚಾರಕ್ಕಾಗಿಯೇ ಖರ್ಚು ಮಾಡಿವೆ. ಉಳಿದಂತೆ ಪ್ರಯಾಣಕ್ಕಾಗಿ ₹79.539 ಕೋಟಿ ಹಾಗೂ ಅಭ್ಯರ್ಥಿಗಳಿಗೆ ₹62.072 ಕೋಟಿ ಪಾವತಿ ಮಾಡಲಾಗಿದೆ ಎಂದು ತಿಳಿಸಿವೆ.


abc